ಅಭಿಪ್ರಾಯ / ಸಲಹೆಗಳು

ವಾರ್ಷಿಕ ಕಾರ್ಯಕ್ರಮಗಳು

ಕನ್ನಡ ಮಾಧ್ಯಮ ಪ್ರಶಸ್ತಿ : 

2001-02 ನೇ ಸಾಲಿನಿಂದ ಜಾರಿಯಲ್ಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಎಸ್.ಎಸ್.‌ಎಲ್.‌ಸಿ. ಮತ್ತು ಪಿ.ಯು.ಸಿ. ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ರಾಜ್ಯ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಯೋಜನೆಯಂತೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರಿಗೆ ರೂ. 25,000/-ಗಳು ಮತ್ತು ತಾಲ್ಲೂಕಿಗೆ ಪ್ರಥಮ ರೂ. 10,000/-, ದ್ವಿತೀಯ ರೂ. 9,000/-, ತೃತೀಯ ರೂ. 8,000/- ಗಳನ್ನು ನಗದಾಗಿ ನೀಡಿ ಗೌರವಿಸಲಾಗುತ್ತದೆ. 

 

ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ :

ನೆರೆ ರಾಜ್ಯಗಳಾದ ಗೋವಾ, ತಮಿಳುನಾಡು, ಕೇರಳ, ಅಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ಪ್ರತಿ ಶಾಲೆಯ 03 ಮಕ್ಕಳಿಗೂ ಸಹ ಗೌರವಿಸಲಾಗುತ್ತಿದೆ. ಶಾಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ ರೂ. 10,000/-, ರೂ, 9,000/-, ರೂ. 8,000/- ನೀಡಿ ಗೌರವಿಸಲಾಗುತ್ತದೆ. 

 

ನ್ಯಾಯಾಂಗದಲ್ಲಿ ಕನ್ನಡ :

ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸಂಪೂರ್ಣವಾಗಿ ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರುಗಳನ್ನು, ಕನ್ನಡದಲ್ಲಿ ವಾದ ಪ್ರತಿವಾದ ಹಾಗೂ ತೀರ್ಪುಗಳ ಮೇಲೆ ಅಭಿಪ್ರಾಯ ಮಂಡಿಸಲು ಸರ್ಕಾರಿ ಅಭಿಯೋಜಕರು ಮತ್ತು ಕನ್ನಡದಲ್ಲಿ ವಾದ ಮಂಡಿಸುವ ಪ್ರತಿ ಜಿಲ್ಲೆಯ ಇಬ್ಬರು ವಕೀಲರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರೂ. 10,000/- ಗಳ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಫಲತಾಂಬೂಲಗಳೊಂದಿಗೆ ಗೌರವಿಸಿ ಸನ್ಮಾನಿಸಲಾಗುತ್ತಿದೆ. 

 

ಕನ್ನಡ ಚಿಂತನೆ :

ಸಾರ್ವಜನಿಕರಿಗೆ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಭಾಷಾಭಿಮಾನ ಬೆಳೆಸಲು ಪ್ರಾಧಿಕಾರವು ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆಗಳಲ್ಲಿ ಕನ್ನಡ ಚಿಂತನೆ ಎಂಬ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು, ಪ್ರತಿ ಕಾರ್ಯಕ್ರಮಕ್ಕೆ ಪ್ರಾದಿಕಾರದ ವತಿಯಿಂದ ರೂ. 20,000/- ಗಳನ್ನು ನೀಡಲಾಗುತ್ತಿದೆ. 

 

ಕನ್ನಡ ಭವನ :

ಗಡಿ ಭಾಗಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಲು ಸುಸಜ್ಜಿತವಾದ ಸ್ಥಳ ಇಲ್ಲದೆ ಇರುವಂತಹ ತಾಲ್ಲೂಕುಗಳಲ್ಲಿ ಕನ್ನಡ ಭವನಗಳನ್ನು ನಿರ್ಮಾಣ ಮಾಡಲು ಸಂಬಂಧಿಸಿದ ಕ್ಷೇತ್ರದ ವಿಧಾನಸಭಾ ಸದಸ್ಯರ ಶಿಫಾರಸ್ಸಿನ ಮೇರೆಗೆ ಕನ್ನಡ ಭವನ ನಿರ್ಮಾಣ ಮಾಡುವ ಸ್ಥಳದಿಂದ ನೀಲಿನಕ್ಷೆ ಹಾಗೂ ಭವನ ನಿರ್ಮಾಣಕ್ಕೆ ಆಕ್ಷೇಪಣೆಗಳು ಇಲ್ಲದಿರುವುದನ್ನು ಗಮನಿಸಿ ಆಯಾ ಜಿಲ್ಲಾಧಿಕಾರಿಗಳ ಮುಖಾಂತರ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತಿದೆ. ಅನುದಾನ ಲಭ್ಯತೆಯ ಆಧಾರದಲ್ಲಿ ಹೋಬಳಿ ಮಟ್ಟದಲ್ಲಿ ರೂ. 10.00 ಲಕ್ಷ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರೂ. 15.00 ಲಕ್ಷ (ವಿಶೇಷ ಸಂದರ್ಭದಲ್ಲಿ ಗರಿಷ್ಟ ರೂ. 20.00 ಲಕ್ಷ ಮೀರದಂತೆ) ಹಣವನ್ನು ಬಿಡುಗಡೆ ಮಾಡಲಾಗುತ್ತದೆ. 

 

ಕನ್ನಡ ಕಲಿಕಾ ಕೇಂದ್ರ :

ಗಾರ್ಮೆಂಟ್ಸ್‌, ಕಾರ್ಖಾನೆಗಳು, ಓ.ಜಿ.ಸಿ. ಕೇಂದ್ರ ಸರ್ಕಾರಿ ಸಾಮ್ಯದ ಸಂಸ್ಥೆಗಳು ಮತ್ತು ಅಂತರಾಷ್ಟ್ರೀಯ ವಿಮಾಣ ನಿಲ್ದಾಣಗಳಲ್ಲಿ ಕೆಲಸ ನಿರ್ವಹಿಸುತಿರುವ ಭಾಷಾ ಅಲ್ಪಸಂಖ್ಯಾತರು, ಮತ್ತು ಕನ್ನಡೇತರರಿಗೆ ಕನ್ನಡ ಕಲಿಸುವ ಸಲುವಾಗಿ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಹಾಗೂ ಒಂದು ಕಾರ್ಯಕ್ರಮಕ್ಕೆ ಪ್ರಾಧಿಕಾರದಿಂದ ರೂ. 30,000/- ಗಳ ಸಹಾಯಧನ ನೀಡಲಾಗುತ್ತದೆ. 

 

ಪಿಠೋಪಕರಣ / ಪಾಠೋಪಕರಣ :

ರಾಜ್ಯದಲ್ಲಿನ / ಗಡಿ ಭಾಗದಲ್ಲಿನ ಹಾಗೂ ಹೊರ ರಾಜ್ಯದಲ್ಲಿರುವ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ಶೇಖರಿಸಲು ಕಪಾಟುಗಳನ್ನು ಹಾಗೂ ಅರ್ಹ ಶಾಲೆಗಳಿಗೆ ಪಿಠೋಪಕರಣಗಳ ಖರೀದಿ ಮತ್ತು ಅರ್ಹ ಕನ್ನಡ ಸಂಸ್ಥೆಗಳಿಗೆ ಪಿಠೋಪಕರಣ / ಕಪಾಟುಗಳು ಹಾಗೂ ಪಾಠೋಪಕರಣಗಳ ಖರೀದಿಗಾಗಿ ಪ್ರಾಧಿಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ. 

 

ಕನ್ನಡ ನುಡಿ ಹಬ್ಬ : 

ಜನರ ನಡುವೆ ಇರುವ ಸುಮಧುರ ಬಾಂಧ್ಯವವನ್ನು ಶ್ರೀಮಂತಗೊಳಿಸುವುದು, ಭಾಷೆಗಳ ವೈವಿಧ್ಯತೆಯನ್ನು ಬೆಸೆದು ಏಕತೆ ಮತ್ತು ಸಮಗ್ರತೆಯನ್ನು ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಸಾಂಸ್ಕೃತಿ ಚಟುವಟಿಕೆಗಳನ್ನು ಗಡಿ ಭಾಗಗಳಲ್ಲಿ ಹಮ್ಮಿಕೊಳ್ಳುವುದರಿಂದ ಕನ್ನಡ ಭಾಷಾ ಬೆಳವಣಿಗೆಯನ್ನು ಪ್ರೋತ್ಸಾಹಿಸಿ ಕನ್ನಡವನ್ನು ವ್ಯಾಪಕವಾಗಿ ಬಳಸುವ ಹಾಗೂ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ʼಕನ್ನಡ ನುಡಿ ಹಬ್ಬʼ ಕಾರ್ಯಕ್ರಮವನ್ನು ರಾಜ್ಯಾದ್ಯಾಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ, ಪ್ರಮುಖ ಪಟ್ಟಣಗಳಲ್ಲಿ ಕನ್ನಡಿಗರು ಅಧಿಕವಾಗಿ ನಲೆಸಿರುವ ಹೊರರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ನಡೆಸಲಾಗಿದೆ.

 

ಕನ್ನಡ ಸಂಸ್ಕೃತಿ ಯುವಜನೋತ್ಸವ :

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ದೃಷ್ಠಿಯಿಂದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸಂಸ್ಕೃತಿ ಯುವಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

 

ಆಡಳಿತದಲ್ಲಿ ಕನ್ನಡ :

ಆಡಳಿತದ ಎಲ್ಲ ಹಂತದಲ್ಲೂ ಕನ್ನಡವನ್ನು ಅನುಷ್ಟಾನಗೊಳಿಸಬೇಕೆನ್ನುವ ಸರ್ಕಾರದ ಆಶಯವನ್ನು ಸಾಕಾರಗೊಳಿಸುವ ಉದ್ದೇಶದಿಂದ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನಿರಂತರವಾಗಿ ಕನ್ನಡ ಕಲಿಸುವ ಹಾಗೂ ನೈಪುಣ್ಯತೆಯನ್ನು ಹೆಚ್ಚಿಸಲು ಆಡಳಿತ ತರಬೇತಿ ಸಂಸ್ಥೆಯ ಸಹಕಾರದೊಡನೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

 

ಭೇಟಿ ಮತ್ತು ಪರಿಶೀಲನೆ : 

ಡಾ. ಸರೋಜಿನಿ ಮಹಿಷಿ ವರದಿಯ ಅನುಷ್ಟಾನ, ತ್ರಿಭಾಷಾ ಸೂತ್ರದಡಿ ಕಡ್ಡಾಯ ಕನ್ನಡ ಬಳಕೆ ಹಾಗೂ ಕನ್ನಡಿಗರಿಗೆ ಉದ್ಯೋಗ ನೀಡುವ ವಿಷಯಗಳ ಕುರಿತಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಕಛೇರಿಗಳು, ಕಾರ್ಖಾನೆಗಳು, ಇನ್ಯೂರೆನ್ಸ್‌ ಕಂಪನಿಗಳು, ಬ್ಯಾಂಕ್‌ಗಳು ಹಾಗೂ ಖಾಸಗಿ ಕಾರ್ಖಾನೆಗಳ ಕಛೇರಿಗಳಿಗೆ ಭೇಟಿ ನೀಡಿ ಪರಿಶೀಲಿಸುವುದಲ್ಲದೆ ಸ್ಪಷ್ಟ ಕ್ರಮಕ್ಕೆ ಸೂಚನೆಗಳನ್ನು ನೀಡಲಾಗಿದೆ.

 

ಹೊರನಾಡ ಕನ್ನಡಿಗರ ಸಮಾವೇಶ : 

ಹೊರನಾಡಿನಲ್ಲಿ ಚದುರಿ ಹೋಗಿರುವ ಕನ್ನಡಿಗರನ್ನೂ ಒಗ್ಗೂಡಿಸುವ ಉದ್ದೇಶದಿಂದ ಹೊರನಾಡು ಕನ್ನಡಿಗರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

 

ನುಡಿತೇರು ಜಾಗೃತಿ ಜಾಥಾ :

ರಾಜ್ಯದ ಜಿಲ್ಲಾ ಕೇಂದ್ರಗಳೂ ಸೇರಿದಂತೆ 75 ತಾಲ್ಲೂಕುಗಳಲ್ಲಿ ಕನ್ನಡ ನುಡಿತೇರು ಕಾರ್ಯಕ್ರಮವನ್ನು ಆಯೋಜಿಸಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಲಾಗಿದೆ.

 

ಭಾಷಾ ಭಾವೈಕ್ಯ ಸಮಾವೇಶ : 

ಸಾಂಸ್ಕೃತಿ ಕರ್ನಾಟಕದ ಪರಿಕಲ್ಪನೆಯೊಂದಿಗೆ ಕನ್ನಡವನ್ನು ಮತ್ತಷ್ಟು ಜಾಗೃತಗೊಳಿಸುವ ಉದ್ದೇಶದಿಂದ ನೆರೆರಾಜ್ಯಗಳಲ್ಲಿ ಭಾಷಾ ಭಾವೈಕ್ಯ ಸಮಾವೇಶಗಳನ್ನು ಆಯೋಜಿಸಲಾಗಿದೆ. 

 

 

ಇತ್ತೀಚಿನ ನವೀಕರಣ​ : 14-05-2019 02:40 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080